ಚಂಡೀಗಢ: ಅಮೆರಿಕದಲ್ಲಿ (America) ಟ್ರಂಪ್ ಆಡಳಿತ ಶುರುವಾಗುತ್ತಿದ್ದಂತೆ ಅಮೆರಿಕದಿಂದ ವಲಸಿಗರನ್ನು ಹೊರ ಹಾಕಲಾಗುತ್ತಿದೆ. ಬುಧವಾರವಷ್ಟೇ ಅಮೆರಿಕದಿಂದ ಹೊರಹಾಕಲ್ಪಟ್ಟ 205 ವಲಸಿಗರು ಭಾರತಕ್ಕೆ (Illegal immigrants,) ಮರಳಿದ್ದಾರೆ. ಮಹಿಳೆಯರು ಮಕ್ಕಳು ಸೇರಿದಂತೆ ನಿನ್ನೆ ಪಂಜಾಬ್ನ ಅಮೃತಸರದಲ್ಲಿರುವ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಸದ್ಯ ಅಲ್ಲಿಂದ ಮರಳಿದ ತಮ್ಮ ಶೋಚನೀಯ ಪರಿಸ್ಥಿತಿಯನ್ನು ಅವರು ಬಿಚ್ಚಿಟ್ಟಿದ್ದು, ಅಮೆರಿಕದ ಸೇನಾ ವಿಮಾನದಲ್ಲಿ ತಮ್ಮ ಕೈ ಕಾಲುಗಳನ್ನು ಕಟ್ಟಿ ಹಾಕಲಾಗಿತ್ತು. ಯುದ್ಧ ಕೈದಿಗಳಂತೆ ನಮ್ಮನ್ನು ನೋಡಿಕೊಳ್ಳಲಾಯಿತು ಎಂಬ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.
ಗಡಿಪಾರು ಮಾಡಿದ ಭಾರತೀಯರನ್ನು ಅಮೆರಿಕದ ಮಿಲಿಟರಿ ವಿಮಾನಗಳ ಮೂಲಕ ತವರಿಗೆ ಕಳುಹಿಸಲಾಗಿದೆ. ಗಡೀಪಾರು ಮಾಡಲಾದವರಲ್ಲಿ ಒಬ್ಬರಾದ ಪಂಜಾಬ್ನ ಗುರುದಾಸ್ಪುರದ 36 ವರ್ಷದ ಜಸ್ಪಾಲ್ ಸಿಂಗ್, ಅಲ್ಲಿನ ಕರಾಳತೆಯನ್ನು ಬಿಚ್ಚಿಟಿದ್ದು, ಅಮೃತಸರದಲ್ಲಿ ಇಳಿದ ನಂತರವೇ ಕೈ, ಕಾಲುಗಳಿಗೆ ಹಾಕಿದ್ದ ಸಂಕೋಲೆಗಳನ್ನು ಬಿಚ್ಚಲಾಯಿತು ಎಂದು ಹೇಳಿದ್ದಾರೆ. ಈ ಮೊದಲು ನಮಗೆ ಭಾರತಕ್ಕೆ ಬರುತ್ತಿದ್ದೇವೆ ಎಂಬುದೂ ಸ್ಪಷ್ಟವಾಗಿ ತಿಳಿದಿರಲಿಲ್ಲ. ನಮ್ಮನ್ನು ಬೇರೆ ಶಿಬಿರಕ್ಕೆ ಕರೆದೊಯ್ಯಲಾಗುತ್ತಿದೆ ಎಂದು ನಾವು ಭಾವಿಸಿದ್ದೆವು. ನಂತರ ಒಬ್ಬ ಪೊಲೀಸ್ ಅಧಿಕಾರಿ ನಮ್ಮನ್ನು ಭಾರತಕ್ಕೆ ಕರೆದೊಯ್ಯಲಾಗುತ್ತಿದೆ ಎಂದು ಹೇಳಿದರು. ನಮ್ಮ ಕೈಗಳಿಗೆ ಕೋಳ ಹಾಕಲಾಯಿತು, ಮತ್ತು ನಮ್ಮ ಕಾಲುಗಳಿಗೆ ಸರಪಳಿ ಹಾಕಲಾಯಿತು. ಅಮೃತಸರ ವಿಮಾನ ನಿಲ್ದಾಣದಲ್ಲಿ ಇವುಗಳನ್ನು ತೆರೆಯಲಾಯಿತು ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲದೆ ಭಾರತಕ್ಕೆ ವಾಪಸ್ ಕಳುಹಿಸುವ ಮೊದಲು ಅವರನ್ನು ಅಮೆರಿಕದಲ್ಲಿ 11 ದಿನಗಳ ಕಾಲ ಬಂಧನದಲ್ಲಿರಿಸಲಾಗಿತ್ತು ಎಂದು ಸಿಂಗ್ ಹೇಳಿದರು.
BREAKING NEWS 🚨
Watch the video yesterday Deported from USA!
Jaspal singh says we were handcuffed and in shackles.
It’s Image of Vishwaguru in the world
It’s shameful 💔pic.twitter.com/xJSPpJUtnR— Ashish Singh (@AshishSinghKiJi) February 6, 2025
ಗಡಿಪಾರದ ಮತ್ತೊಬ್ಬ ಹರ್ವಿಂದರ್ ಸಿಂಗ್ ಮೆಕ್ಸಿಕೋದಿಂದ ಅಮೆರಿಕಕ್ಕೆ ಪ್ರಯಾಣಿಸುವಾಗ, “ನಾವು ಬೆಟ್ಟಗಳನ್ನು ದಾಟಿದೆವು. ಇತರ ಜನರೊಂದಿಗೆ ನನ್ನನ್ನು ಕರೆದೊಯ್ಯುತ್ತಿದ್ದ ದೋಣಿ ಸಮುದ್ರದಲ್ಲಿ ಮುಳುಗುವ ಹಂತದಲ್ಲಿತ್ತು, ಆದರೆ ನಾವು ಬದುಕುಳಿದೆವು. ಪನಾಮ ಕಾಡಿನಲ್ಲಿ ಒಬ್ಬ ವ್ಯಕ್ತಿ ಸಾಯುವುದನ್ನು ಮತ್ತು ಇನ್ನೊಬ್ಬ ಸಮುದ್ರದಲ್ಲಿ ಮುಳುಗುವುದನ್ನು ನೋಡಿದ್ದೇನೆ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Indian Migrants: ಪಂಜಾಬ್ ಏರ್ಪೋರ್ಟ್ಗೆ ಬಂದಿಳಿದ ಅಮೆರಿಕದಿಂದ ಗಡಿಪಾರಾದ 205 ಭಾರತೀಯರು
A #Fake image is being shared on social media by many accounts with a claim that illegal Indian migrants have been handcuffed and their legs chained while being deported by US#PIBFactCheck
▶️ The image being shared in these posts does not pertain to Indians. Instead it shows… pic.twitter.com/9bD9eYkjVO
— PIB Fact Check (@PIBFactCheck) February 5, 2025
ಇದರ ಹೊರತಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಫೋಟೋದ ಅಸಲಿಯನ್ನು ಹೇಳಿರುವ ಪಿಐಬಿ ಫ್ಯಾಕ್ಟ್ ಚೆಕ್ ಈ ಮಾತುಗಳು ಸತ್ಯಕ್ಕೆ ದೂರ ಎಂದು ಹೇಳಿದೆ. ಭಾರತೀಯ ವಲಸಿಗರನ್ನು ಗಡೀಪಾರು ಮಾಡುವ ಸಮಯದಲ್ಲಿ ಕೈಗಳಿಗೆ ಕೋಳ ಹಾಕಲಾಗಿದೆ ಮತ್ತು ಅವರ ಕಾಲುಗಳನ್ನು ಸರಪಳಿಯಿಂದ ಬಂಧಿಸಲಾಗಿದೆ ಎಂದು ಹೇಳುತ್ತದೆ, ಅದು ವಾಸ್ತವವಾಗಿ ಗ್ವಾಟೆಮಾಲನ್ ಪ್ರಜೆಗಳದ್ದಾಗಿದೆ, ಭಾರತೀಯರಲ್ಲ ಎಂದು ವರದಿ ಹೇಳಿದೆ.