ನವದೆಹಲಿ:
ಇತ್ತೀಚಿನ ಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ ರಿಪೋರ್ಟ್(ಐಎಸ್ಎಫ್ಆರ್) 2023ರ ಪ್ರಕಾರ, ಶೇ. 24.62 ರಷ್ಟಿದ್ದ ದೇಶದ ಒಟ್ಟು ಅರಣ್ಯ ಮತ್ತು ಮರಗಳ ವ್ಯಾಪ್ತಿಯು 2023 ರಲ್ಲಿ ಶೇ. 25.17ಕ್ಕೆ ಹೆಚ್ಚಾಗಿದೆ.ಏತನ್ಮಧ್ಯೆ, ಮೊದಲ ಬಾರಿ, ಕೃಷಿ ಅರಣ್ಯ ಅಡಿಯಲ್ಲಿ ಬೆಳೆದ ಮರಗಳನ್ನು ಸಹ ಅರಣ್ಯ ವ್ಯಾಪ್ತಿಗೆ ತರಲಾಗಿದೆ.
ISFR 2023 ವರದಿಯು ಅರಣ್ಯ ಪ್ರದೇಶವನ್ನು ದಾಖಲಿಸಿದೆ ಮತ್ತು ಮರಗಳ ವ್ಯಾಪ್ತಿಯು ಶೇ. 25.17ಕ್ಕೆ ಏರಿಕೆಯಾಗಿದೆ. ಒಟ್ಟು ಅರಣ್ಯ ಪ್ರದೇಶವು 7,15,342.61 ಚದರ ಕಿ.ಮೀ ಆಗಿದ್ದು, ಇದು ದೇಶದ ಭೌಗೋಳಿಕ ಪ್ರದೇಶದ ಶೇ. 21.76 ರಷ್ಟು ಇದ್ದು, ದೇಶದ ಭೌಗೋಳಿಕ ಪ್ರದೇಶದ ಶೇ. 3.41 ರಷ್ಟು ಮರಗಳಿವೆ. ಇವೆರಡು ಸೇರಿ ಒಟ್ಟು ಅರಣ್ಯ ಮತ್ತು ಮರಗಳ ವ್ಯಾಪ್ತಿಯು 8,27,356.95 ಚ.ಕಿ.ಮೀ. ಇದೆ.
ಕುರುಚಲು ಪ್ರದೇಶವು 43,622 ಚದರ ಕಿಮೀ (1.33%) ಮತ್ತು ಅರಣ್ಯೇತರ ಪ್ರದೇಶವು 24,16,489 ಚದರ ಕಿಮೀ (73.50%) ಆವರಿಸಿದೆ.