ಹುಬ್ಬಳ್ಳಿ: ಹು-ಧಾ ಪೊಲೀಸ್ ಆಯುಕ್ತರಾಗಿ ಎನ್.ಶಶಿಕುಮಾರ್ ನೇಮಕವಾಗಿದ್ದೆ ತಡ ಹು-ಧಾ ಮಹಾನಗರದಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುತ್ತಿದ್ದಾರೆ. ಈ ಮೂಲಕ ಅವಳಿನಗರದ ಸ್ವಾಸ್ಥ್ಯ ಕಾಪಾಡಲು ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ. ಇದಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದೇ ನಿಟ್ಟಿನಲ್ಲಿ ಇಲಾಖೆಯಲ್ಲಿಯೂ ಸ್ವಾಸ್ಥ್ಯ ಕಾಪಾಡುವ ಕೆಲಸವನ್ನು ಪೊಲೀಸ್ ಆಯುಕ್ತರು ಮಾಡಬೇಕಿದೆ.
ಹೌದು, ಹು-ಧಾ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಒಂದೇ ಠಾಣೆಯಲ್ಲಿ ಐದು ವರ್ಷ ಪೂರೈಸಿ ಪುನಃ ವರ್ಗಾವಣೆಯಾಗದೇ ಅದೇ ಠಾಣೆಯಲ್ಲಿ ಕೆಲವು ಸಿಬ್ಬಂದಿಗಳು ಠಿಕಾಣಿ ಹೂಡಿದ್ದಾರೆ. ಒಂದೆಡೆ ಪೊಲೀಸ್ ಆಯುಕ್ತರು ಹು-ಧಾ ಮಹಾನಗರದಲ್ಲಿ ಒಂದೊಳ್ಳೆ ವಾತಾವರಣ ನಿರ್ಮಿಸುವ ಕಾರ್ಯಕ್ಕೆ ಮುಂದಾಗಿದ್ದರೇ, ಇನ್ನೊಂದೆಡೆ ಆಯುಕ್ತರ ಕಾರ್ಯವನ್ನು ಹಾಳು ಮಾಡುವ ಮೂಲಕ ವಾತಾವರಣವನ್ನು ಕೆಡೆಸುವ ಕಾರ್ಯಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಆಯುಕ್ತರು ಅಂತಹ ಸಿಬ್ಬಂದಿಗಳ ಬಗ್ಗೆ ಎಚ್ಚೆತ್ತುಕೊಂಡ ಇಲಾಖೆಯ ಅಂತರಾಳದ ಶುದ್ಧಿಯ ಕಾರ್ಯ ಮಾಡುವುದು ಅತ್ಯಗತ್ಯವಾಗಿದೆ.
ಒಂದು ಠಾಣೆಯಿಂದ ವರ್ಗಾವಣೆಗೊಂಡು ಕನಿಷ್ಠ ಒಂದು ವರ್ಷವಾದರೂ ಬೇರೆಡೆ ಸೇವೆ ಸಲ್ಲಿಸಬೇಕೆಂಬ ನಿಯಮವಿದೆ. ಆದರೂ ಸಹಿತ ಒಂದು ತಿಂಗಳಲ್ಲಿ ಮತ್ತೆ ಅದೇ ಠಾಣೆಗೆ ವರ್ಗಾವಣೆಗೊಂಡು ಸರ್ಕಾರದ ಆದೇಶದ ಉಲ್ಲಂಘನೆ ಮಾಡಿದ್ದು ಸರಿಯೇ..?
ಯಾಕೆಂದರೆ ಒಂದೇ ಪೊಲೀಸ್ ಠಾಣೆಯಲ್ಲಿ ಠಿಕಾಣಿ ಹೂಡಿ ಠಾಣೆಗಳ ವ್ಯಾಪ್ತಿಯಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ಹಿಂದೆ ಠಿಕಾಣಿ ಹೂಡಿರುವ ಸಿಬ್ಬಂದಿಗಳು, ಪ್ರಭಾವ ಬೀರುವ ಕೆಲಸಗಳಾಗುತ್ತಿವೆ.
ಈ ನಿಟ್ಟಿನಲ್ಲಿ ದಕ್ಷ ಅಧಿಕಾರಿ ಎನ್.ಶಶಿಕುಮಾರ್ ಅವರು ಈ ಸಂಗತಿಗಳನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಅವಧಿ ಮೀರಿ ಒಂದೇ ಸ್ಥಳದಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳ ವರ್ಗಾವಣೆ ಕುರಿತು ಸರಕಾರದ ನಿಯಮಾವಳಿಯ ಅನುಸಾರ ಕೂಡಲೇ ವರ್ಗಾವಣೆ ಮಾಡುವ ಕಾರ್ಯ ಮಾಡಬೇಕಿದೆ. ಈ ಮೂಲಕ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ನೆರವಾಗಬೇಕು ಎಂಬುದು ಪ್ರಜ್ಞಾವಂತ ಸಾರ್ವಜನಿಕರ ಅಭಿಪ್ರಾಯವಾಗಿದೆ.
ಕೂಡಲೇ ದಕ್ಷ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು ಸರ್ಕಾರದ ನಿಯಮವನ್ನು ಗಂಭೀರವಾಗಿ ತೆಗೆದುಕೊಂಡು ಒಂದೇ ಸ್ಥಳದಲ್ಲಿ ಠಿಕಾಣಿ ಹೂಡಿರುವ ಸಿಬ್ಬಂದಿಗಳ ವರ್ಗಾವಣೆ ಮಾಡಬೇಕು.
ಇಲ್ಲವಾದಲ್ಲಿ ಆಯುಕ್ತರು ಇಷ್ಟು ದಿನಗಳ ಕಾಲ ಮಾಡಿರುವ ಕಾರ್ಯಕ್ಕೆ ಕಪ್ಪುಚುಕ್ಕೆ ಬರುವ ದಿನಗಳು ದೂರವಿಲ್ಲ.
ಜೈ ಶ್ರೀ “ರಾಮ” ಜೈ “ಹನುಮಂತ” ಜೈ “ಬಸವಣ್ಣ”.!shhhh
ಕರ್ನಾಟಕ ಪಬ್ಲಿಕ್ ವಾಯ್ಸ್.
ಇದು ಅಪರಾಧ ಸುದ್ದಿಗಳ ಅನಾವರಣ.