ಮುಂಬೈ:
ನ್ಯಾಷನಲ್ ಕ್ರಶ್, ಬಹುಭಾಷಾ ಸ್ಟಾರ್ ನಟಿ, ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಅವರು ಇಂದು 29 ನೇ ಬರ್ತ್ಡೇ ಸಂಭ್ರಮದಲ್ಲಿದ್ದಾರೆ. ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ರಶ್ಮಿಕಾ ಒಮನ್ನಲ್ಲಿ ಆಚರಿಸಿಕೊಳ್ಳುತ್ತಿದ್ದು, ಅಲ್ಲಿನ ಫೊಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿವೆ. ತಮ್ಮ ಹುಟ್ಟುಹಬ್ಬಕ್ಕೆ ಒಂದು ದಿನ ಮೊದಲೇ ಒಮಾನ್ಗೆ ಹೋಗಿರುವ ರಶ್ಮಿಕಾ ಮತ್ತು ಅವರು ಭೇಟಿ ನೀಡಿದ ರೆಸಾರ್ಟ್ನ ಚಿತ್ರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ಒಮನ್ನ ಐಷಾರಾಮಿ ರೆಸಾರ್ಟ್ ಅಲ್ ಬಲೀದ್ ಸಲಾಲಾ ಬೈ ತಂಗಿದ್ದು, ಅವರೊಂದಿಗೆ ಅವರ ಆತ್ಮೀಯ ಸ್ನೇಹಿತರೂ ಇದ್ದಾರೆ. ತಮ್ಮ ಸ್ನೇಹಿತರೊಂದಿಗೆ ಅದ್ಧೂರಿ ಹುಟ್ಟುಹಬ್ಬದ ಆಚರಣೆಗಳನ್ನು ಮಾಡಿಕೊಳ್ಳಲಿದ್ದಾರೆ ರಶ್ಮಿಕಾ. ಇನ್ನು ರಶ್ಮಿಕಾ ಅವರ ರೂಮರ್ ಬಾಯ್ಫ್ರೆಂಡ್ ನಟ ವಿಜಯ್ ದೇವರಕೊಂಡ ಶನಿವಾರ ಇಲ್ಲಿಗೆ ಬರಬಹುದು ಎನ್ನಲಾಗಿದೆ. ವಿಜಯ್ ದೇವರಕೊಂಡ ಪ್ರಸ್ತುತ ಶ್ರೀಲಂಕಾದಲ್ಲಿ ಶೂಟಿಂಗ್ ಬ್ಯುಸಿಯಲ್ಲಿದ್ದಾರೆ. ಆದರೂ ನೆಚ್ಚಿನ ಗೆಳತಿಯ ಬರ್ತ್ಡೇಗೆ ಅವರು ಒಮನ್ಗೆ ತೆರಳುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಅನಿಮಲ್, ಪುಷ್ಪ 2, ಛಾವಾ, ಸಿಕಂದರ್ ಹೀಗೆ ಬ್ಯಾಕ್ ಟು ಬ್ಯಾಕ್ ಹಿಟ್ ಮೂವಿ ಬಳಿಕ ರಿಲ್ಯಾಕ್ಸ್ ಮೂಡ್ನಲ್ಲಿರುವ ರಶ್ಮಿಕಾ ಬರ್ತ್ಡೇ ಎಂಜಾಯ್ ಮಾಡ್ತಿದ್ದಾರೆ. ಸದ್ಯ ರಶ್ಮಿಕಾ ಪೂಲ್ಸೈಡ್ ರೆಸ್ಟೋರೆಂಟ್ನಲ್ಲಿ ತಮ್ಮ ಫುಡ್ ಎಂಜಾಯ್ ಮಾಡುತ್ತಿರುವ ಫೊಟೋಗಳನ್ನು ಹಂಚಿಕೊಂಡಿದ್ದು, ಹೊಟ್ಟೆ ಬಿರಿಯುವಂತಹ ಟೇಸ್ಟಿ ಫುಡ್. ಟ್ರೈನರ್ ನೋಡಿದ್ರೆ ಕೋಪ ಮಾಡಿಕೊಳ್ಳಬಹುದು ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.