ನಾಯಕನಹಟ್ಟಿ :
ಹೋಬಳಿಯ ರಾಮಸಾಗರ ಗ್ರಾಮದಲ್ಲಿ ಮಾರ್ಚ್ 23 ರಿಂದ 25 ರವರೆಗೆ ಶ್ರೀ ಗಾದ್ರಿಪಾಲ ನಾಯಕ ಸ್ವಾಮಿ ನೂತನ ದೇವಸ್ಥಾನ ಲೋಕಾರ್ಪಣೆ ಕಳಸಾರೋಹಣ ಹಾಗೂ ಗುಗ್ಗರಿ ಹಬ್ಬ ತಿಮ್ಮಪ್ಪಯ್ಯನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ರಾಮಸಾಗರ ಗ್ರಾಮದಲ್ಲಿ
ಮ್ಯಾಸನಾಯಕ ಬುಡಕಟ್ಟು ಗಟ್ಟಿಮುತ್ತಿನಾಯಕರ ಮೂಲಪುರುಷ ಸಾಂಸ್ಕೃತಿಕ ವೀರ ಹಾಗೂ ನಮ್ಮ ಮನೆ ದೇವರಾದ ಶ್ರೀ ಗಾದ್ರಿಮಲೆ ಹೆಬ್ಬುಲಿ ಶ್ರೀ ಗಾದ್ರಿಪಾಲನಾಯಕ ಸ್ವಾಮಿಯ ನೂತನ ದೇವಸ್ಥಾನದ ಲೋಕಾರ್ಪಣೆ ಕಳಸಾರೋಹಣ ಹಾಗೂ ಗುಗ್ಗರಿ ಹಬ್ಬ ದಿನಾಂಕ 23-03-2025ರಿಂದ 25-03-2025ವರಗೆ ನಡೆಯಲಿದ್ದು ಈ ಕಾರ್ಯಕ್ರಮವು ಶ್ರೀಶೈಲ ಮಲ್ಲಿಕಾರ್ಜುನ ದೇವರ ಎತ್ತುಗಳ ಸನ್ನಿಧಾನದಲ್ಲಿ ರಾಮಸಾಗರ ಗ್ರಾಮ ಚಳ್ಳಕೆರೆ ತಾಲ್ಲೂಕು ಚಿತ್ರದುರ್ಗ ಜಿಲ್ಲೆಯಲ್ಲಿ ನಡೆಯುತ್ತದೆ
ನಮ್ಮ ಮ್ಯಾಸಮಂಡಲದ ಸಮಸ್ತ ಸದ್ಭಕ್ತರು ಹಾಗೂ ಬಂಧು ಮಿತ್ರರು ಭಾಗವಹಿಸಿ ಶ್ರೀ ಗಾದ್ರಿಪಾಲನಾಯಕ ಸ್ವಾಮಿಯ ಕೃಪಾಆಶೀರ್ವಾಗಳಿಗೆ ಪಾತ್ರರಾಗಲು ಕೋರಿರುತ್ತೇವೆ ಶ್ರೀ ಗಾದ್ರಿಪಾಲ ನಾಯಕ ದೇವರ ಗುಡಿ ಕಟ್ಟಿನ ಗುರು- ಹಿರಿಯರು ಅಣ್ಣತಮ್ಮಂದಿರು ಸಮಸ್ತ ಭಕ್ತಾದಿಗಳು ಶುಭಾಶ ಕೊರಿದ್ದಾರೆ